ಒಂದು ಕ್ರಿಸ್ಮಸ್ ಕವನ

Please click here to read “ಒಂದು ಕ್ರಿಸ್ತ್ಮಸ್ ಕವನ.” ಇದು ಚಾರ್ಲ್ಸ್ ಡಿಕ್ಕಿನ್ಸ್ ಅವರ “A Christmas Carol” novel ನ ಅನುವಾದ by JN.

https://issuu.com/home/published/ackvana

ಪುಸ್ತಕದ ಕಿರುಪರಿಚಯ


ಆಂಗ್ಲ ಭಾಷೆಯ ಕಾದಂಬರಿಕಾರನಾದ ಚಾರ್ಲ್ಸ್ ಢಿಕ್ಕಿನ್ಸ್ ನು ವಿಕ್ಟೋರಿಯಾ ಕಾಲದ ಉನ್ನತಮಟ್ಟದ ಬರೆಹಗಾರ. ಅವನ ಅತ್ಯಂತ ಜನಪ್ರಿಯವಾದ ಕಥೆಗಳಲ್ಲಿ, "ಎ ಕ್ರಿಸ್ಮಸ್ ಕರೋಲ್", ಕಥೆಯೂ ಒಂದು. ಸಮಾಜದ ಕೆಟ್ಟಗುಣ, ಅನ್ಯಾಯ, ಮತ್ತು ಆಡಂಬರಗಳ ವಿರುದ್ಧ ಕ್ರಾಂತಿಸಾರುವ ಪಾತ್ರಗಳ ನಿರ್ಮಾಣ ಮಾಡುವುದೇ ಅವನ ಕೃತಿಗಳಲ್ಲಿನ ವಿಶೇಷತೆ.

ಕ್ರಿಸ್ಮಸ್ ಕರೋಲ್ ಡಿಕನ್ಸ್ ನು ಆರು ವಾರಗಳಲ್ಲಿ, ೧೮೪೩ನೇ ಇಸವಿಯ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಬರೆದ ಕಾದಂಬರಿ. ಡಿಕನ್ಸ್ ಗೆ ತನ್ನ ಪುಸ್ತಕ ಪ್ರಖ್ಯಾತವಾಗುವುದರಲ್ಲಿ ಸಂದೇಹವೇ ಇಲ್ಲದುದರಿಂದ ಅದರ ಹಕ್ಕನ್ನು ಪ್ರಕಾಶಕರಿಗೆ ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಅವನ ನಿರೀಕ್ಷೆ ಸುಳ್ಳಾಗಲಿಲ್ಲ.

ಬ್ರಿಟನ್ ನಲ್ಲಿ ಸರಕಾರ "Poor’s Law" ಎಂಬ ಕ್ಷೇಮಾಭಿವೃದ್ಧಿ ಯೋಜನೆಯನ್ನು ಬದಲಾವಣೆ ಮಾಡಿ, ಸಹಾಯಕ್ಕಾಗಿ ಅರ್ಜಿಯನ್ನು ಸಲ್ಲಿಸುವವರು ಅನೇಕ ಶರತ್ತುಗಳಲ್ಲಿ ಒಂದಾದ "ಟ್ರೆಡ್ ಮಿಲ್" ಎಂಬುವಲ್ಲಿ ಕೆಲಸ ಮಾಡಲೇಬೇಕೆಂದು ಖಾಯಿದೆಯನ್ನು ಮಾಡಿದರು. ಇದರಿಂದ ನೊಂದ ಡಿಕನ್ಸ್ Industrial Revolution ನ ಪರಿಣಾಮವಾಗಿ ಕೆಲಸವಿಲ್ಲದೆ ಬಡತನಕ್ಕೆ ನೂಕಲ್ಪಟ್ಟವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಮಾನವೀಯತೆಯ ದೃಷ್ಟಿಯಿಂದ ಅವರಿಗೆ ನೆರವು ನೀಡಲು ಸಮಾಜಕ್ಕೆ ಎಚ್ಚರಿಸುತ್ತಾನೆ. ಇದನ್ನೇ ಕಥೆಯಲ್ಲಿ ಬರುವ ಅಜ್ಞಾನ ಮತ್ತು ಆಸೆ ಎಂಬುವ ಮಕ್ಕಳಿಗೆ ಆಗುವ ದುರ್ಗತಿಯನ್ನು ವರ್ಣಿಸುತ್ತಾನೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಈ ಪುಸ್ತಕ ಪ್ರಕಟವಾದಂದಿನಿಂದ ಇಂದಿನವರೆಗೆ ಎಲ್ಲಾ ಊಹಿಸಬಹುದಾದಂತಹ ಮಾಧ್ಯಮಗಳಿಂದ ಈ ಕಥೆಯನ್ನು ಹೇಳಲಾಗಿದೆ. ನೂರಾರು ಬಾರೆ ಇದನ್ನು ನಾಟಕಕ್ಕೆ, ರೇಡಿಯೋಗೆ, ಚಲನಚಿತ್ರಕ್ಕೆ, ಮತ್ತು ಟೆಲಿವಿಷನ್ ಗಳಿಗೆ ಅಳವಡಿಸಿದರೂ, ಈಗಲೂ ಇದು ಅತ್ಯಂತ ಪ್ರಸಿದ್ದವಾದ ಮತ್ತು ಹೃದಯಸ್ಪರ್ಶಿಯಾದ ಕಥೆ.

ಡಿಕನ್ಸ್ ತನ್ನ ಕೊನೆಯ ದಿನಗಳಲ್ಲಿ ಕಿರಿದುಮಾಡಿದ ಕೃತಿಯನ್ನು ಸಾರ್ವಜನಿಕರ ಮುಂದೆ ಓದಿ ಹಣಗಳಿಸುತ್ತಿದ್ದನು. ಅದರಿಂದ ಬಂದ ಹಣವನ್ನು ಅವನು ಜೀವನಪರ್ಯಂತ ದಾನ ಕೊಡುತ್ತಾ ಬಂದಿದ್ದ ಅನೇಕ ಸಾಮಾಜಿಕ ಧರ್ಮಸಂಸ್ಥೆಗಳಿಗೆ ದಾನಮಾಡುತ್ತಿದ್ದನು. ಜನರಿಗೆ ಬಡತನದ ಅರಿವಾಗಿಸುವುದೇ ಅವನ ಈ ಪುಸ್ತಕದ ಉದ್ದೇಶವಾಗಿತ್ತು.

ಡಿಕನ್ಸ್ ನ ಕ್ರಿಸ್ಮಲ್ ಕರೋಲ್ ಬ್ರಿಟಿಷ್ ಜನತೆಯ ಮೇಲೆ ಹೆಚ್ಚು ಪ್ರಭಾವ ಬೀರಿದ ಏಕಮಾತ್ರ ಕೃತಿಯಾಗಿ, ಕ್ರಿಸ್ಮಸ್ ಹಬ್ಬದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ ಕಥೆಯಾಗಿದೆ. ಇದು ಓದುಗರಿಗೆ ಬೆಳಕು, ಸಂತೋಷ, ಉತ್ಸಾಹ, ಮತ್ತು ಸಂತೃಪ್ತ ಜೀವನಗಳ ಚಿತ್ರಗಳನ್ನು ಮುಂದಿಟ್ಟರೂ, ಅದರ ಜೊತೆಗೇ ಬಲವಾದ ಮತ್ತು ಮರೆಯಲಾಗದ ಕತ್ತಲೆ, ದುಃಖ, ಕಠೋರತೆ, ಮತ್ತು ಸಾವುಗಳ ಚಿತ್ರಗಳನ್ನೂ ನೆನಪಿಗೆ ತರಿಸುತ್ತದೆ. ಕಥೆಯಲ್ಲಿ ಬರುವ ಸ್ಕ್ರೂಜನು ಕಠಿಣವಾದ ಚಳಿಗಾಲದ ಪ್ರತೀಕ. ಆದರೂ ವಸಂತಕಾಲದಲ್ಲಿ ಪ್ರಕೃತಿಯ ಬದಲಾವಣೆ ಆಗುವ ರೀತಿ ಅವನ ಬಾಲ್ಯದ, ನಿರ್ಮಲವಾದ ಸುಪ್ತ ಚೇತನವನ್ನು ಸ್ಪುಟಗೊಳಿಸಿ, ತನ್ನ ಕಠೋರವಾದ ಮನಸ್ಸನ್ನು ಬದಲಾಯಿಸಿ, ಪುನಃ ಮೊದಲಿನ ಸಹೃದಯನಾಗಿ ಮಾರ್ಪಡುವುದು ಅವನ ವ್ಯಕ್ತಿತ್ವ.

"ಕ್ರಿಸ್ಮಸ್ ನ ಹಳೆಯ ಮತ್ತು ಉದಾರತೆಯ ಸಂಪ್ರದಾಯಕ್ಕೆ, ಅದರ ಸಾಮಾಜಿಕ ಮತ್ತು ಧರ್ಮದ ಆಚರಣೆಗಳಿಗೆ ಎಂದಾದರೂ ಧಕ್ಕೆ ಅಥವಾ ಕ್ಷೀಣಿಸುವ ಚಿಹ್ನೆ ಕಂಡು ಬಂದರೆ, ಈ ಪುಸ್ತಕವು ಅದಕ್ಕೆ ಮರುಜೀವನ ಕೊಡುವಂತಹ ಪುಸ್ತಕ," ಎಂದು ಥಾಮಸ್ ಹುಡ್ ಎಂಬ ಕವಿ ಹೇಳಿದ್ದಾನೆ.

ಡಿಕಾನ್ಸ್ ನಿಗೆ ಎಲ್ಲಾ ಬಗೆಯ ಜನರಿಂದ, ಎಲ್ಲಾ ಬಗೆಯ ಪತ್ರಗಳು ಬರತೊಡಗಿದವು. ಅವರು ಹೇಗೆ ತಮ್ಮ ತಮ್ಮ ಮನೆಗಳನ್ನು ಮತ್ತು ಅಡುಗೆ ಮನೆಗಳನ್ನು ಪುಸ್ತಕದಲ್ಲಿರುವ ಪ್ರಕಾರ ಸಜ್ಜುಗೊಳಿಸಿರುವುದಾಗಿಯೂ, ಹೇಗೆ ಕ್ರಿಸ್ಮಸ್ ಕರೋಲ್ ನ್ನು ಗಟ್ಟಿಯಾಗಿ ಓದುವುದಾಗಿಯೂ, ಮತ್ತು ಹೇಗೆ ಪುಸ್ತಕಕ್ಕಾಗಿಯೇ ಒಂದು ಪುಟ್ಟ ಶೆಲ್ಫ್ ಅನ್ನು ಮಾಡಿಸಿ ಪುಸ್ತಕವನ್ನು ಇಟ್ಟಿರುವುದಾಗಿಯೂ ವರ್ಣಿಸಿ ಅನೇಕ ಪತ್ರಗಳು ಬರತೊಡಗಿದವು ಎಂದು ಚಾರ್ಲ್ಸ್ ಡಿಕನ್ಸ್ ನೇ ಹೇಳುಕೊಂಡಿದ್ದಾನೆ.

ಈ ಪುಸ್ತಕ ಮುದ್ರಣವಾದ ಮೇಲೆ "ಮೆರಿ ಕ್ರಿಸ್ಮಸ್" ಎಂಬುವ ನುಡಿಗಟ್ಟು ಬಹಳ ಜನಪ್ರಿಯವಾಯಿತು. ರುತ್ ಗ್ಲಾನ್ಸಿ ಎಂವವನ ಪ್ರಕಾರ ಈ ಪುಸ್ತಕ ಓದುಗರ ಮೇಲೆ ಬಹಳ ಪ್ರಭಾವ ಬೀರಿದ್ದೇ ಇದರ ಒಂದು ದೊಡ್ಡ ಸಾಧನೆ. ಬ್ರಿಟನ್ ಮತ್ತು ಅಮೆರಿಕಾಗಳಲ್ಲಿ ಈ ಪುಸ್ತಕವನ್ನು ಓದಿದ ಪರಿಣಾಮವಾಗಿ ಸಾಮಾಜಿಕ ಧರ್ಮಸಂಸ್ಥೆಗಳ ಮಹಾಪೂರವೇ ಸ್ಪೋಟಗೊಂಡು ಹೆಚ್ಚು ಹೆಚ್ಚಾಗಿ ದಾನಿಗಳಿಂದ ಹಣದ ಸುರಿಮಳೆ ಆರಂಭವಾಯಿತು ಎಂದು ಒಂದು ಪತ್ರಿಕೆ ಹೇಳುತ್ತದೆ. ಥಾಮಸ್ ಕಾರ್ಲೆಯ್ಲ್ ನು ಪುಸ್ತಕ ಓದಿದನಂತರ ಎರಡು ಉದಾರವಾದ ಕ್ರಿಸ್ಮಸ್ ಡಿನ್ನರ್ ಗಳನ್ನು ಏರ್ಪಡಿಸಿದನಂತೆ; ಫೈರ್ಬ್ಯಾಕ್ಸ್ ಎಂಬುವನು ತನ್ನ ಫ್ಯಾಕ್ಟರಿಯನ್ನು ಕ್ರಿಸ್ಮಸ್ ಈವ್ ದಿನ ರಜೆಯನ್ನು ಸಾರಿ, ಪ್ರತಿಯೊಬ್ಬ ನೌಕರನ ಮನೆಗೂ ಒಂದೊಂದು ಟರ್ಕಿ ಕೋಳಿಯನ್ನು ಕಳುಹಿಸಿದನಂತೆ; ಅಲ್ಲಿಯ ರಾಣಿ ಲಂಡನ್ನಿನ ಅಂಗವಿಕಲ ಮಕ್ಕಳಿಗೆಲ್ಲಾ 'ಟೀನಿ ಟಿಮ್' ನ ಹೆಸರಿನಲ್ಲಿ ಉಡುಗೊರೆಗಳನ್ನು ಕಳುಹಿಸಿದಳಂತೆ. ಈ ಪುಸ್ತಕ ಓದಿದ ಪರಿಣಾಮವಾಗಿ, ಇನ್ನೂ ಲೆಕ್ಕವಿಲ್ಲದಷ್ಟು ಘಟನೆಗಳು ನಡೆದಿವೆ ಎಂದು ಹೇಳುವುದರಲ್ಲಿ ಸಂಶಯವಿಲ್ಲ.

ಪುಸ್ತಕದಲ್ಲಿರುವ ಗಣ್ಯವಾದ ವಿಷಯವು ನನಗೆ ಈ ಪುಸ್ತಕವನ್ನು ಭಾಷಾಂತರಿಸಲು ಪ್ರೇರಿಪಿಸಿತು.

https://issuu.com/home/published/ackvana

-JN